ಅದ್ದೂರಿಯಾಗಿ ಜರುಗಿದ ಕಮತಗಿ ಗಿರಿಮಠದ ಜಾತ್ರೆ

 

ಬಾಗಲಕೋಟೆ ಜಿಲ್ಲೆಯ ಕಮತಗಿ ಪಟ್ಟಣದ ಹೊರ ವಲಯದ ಗುಡ್ಡದ ಮೇಲಿನ ಗಿರಿ ಮಠದ ಶ್ರೀ ಹುಚ್ಚೇಶ್ವರ ರಥೋತ್ಸವವು ರವಿವಾರ ಸಂಜೆ ಸಡಗರದೊಂದಿಗೆ ಅದ್ದೂರಿಯಾಗಿ ಜರುಗಿತು

ಬೆಳಗಿನ ಜಾವ ಗಿರಿಮಠದ ಕರ್ತೃ ಗದ್ದುಗೆಗೆ ಪೂಜೆ ನೆರವೇರಿಸಿ ಮದ್ಯಾಹ್ನ ವಿವಿಧ ಕಲಾ ವಾದ್ಯಗಳೊಂದಿಗೆ ಕಮತಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಥದ ಕಳಶವನ್ನು ಮೆರವಣಿಗೆ  ಮಾಡಲಾಯಿತು 

ನಂತರ ಸಂಜೆ ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವ ನಡೆಸಲಾಯಿತು ಮಳೆ ನಡುವೆಯೂ ಭಕ್ತರು ಶ್ರೀ ಹುಚ್ಚೇಶ್ವರ ಮಹಾರಾಜಕಿ ಜೈ ಎಂಬ ಜಯಘೋಷಗಳ ನಡುವೆ ರಥೋತ್ಸವ ಜರುಗಿತು 

ರಥೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಮ ನಿ ಪ್ರ ಹುಚ್ಚೇಶ್ವರ ಮಹಾಸ್ವಾಮಿಗಳು ಕಮತಗಿಯ ಹಿರೇಮಠದ ಷ. ಬ್ರ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಮುನವಳ್ಳಿಯ ಶ್ರೀ ಮುರುಗೇದ್ರ ಮಹಾಸ್ವಾಮಿಗಳು ಕುಂದರಗಿಯ ಶ್ರೀ ಅಡವಿ ಸಿದ್ದೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು 

ಕಮತಗಿ. ರಾಮಥಾಳ, ಕಡಿವಾಲ, ಇಂಗಳಗಿ, ಸುರಳಿಕಲ್ಲ, ಹೂವಿನಹಳ್ಳಿ, ಬೇವಿನಾಳ, ಮೂಗನೂರ ಮರಡಿ ಬೂದಿಹಾಳ ಬಸನಾಳ ಬಸರಿಕಟ್ಟಿ ಗ್ರಾಮಗಳ ಜನರು ತಂಡೋಪ ತಂಡವಾಗಿ ಕುಟುಂಬ ಸಮೇತ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು

ಅಮೀನಗಡ ಪೋಲೀಸ್ ಠಾಣೆಯ ಸಿಬ್ಬಂದಿಗಳು ಜಾತ್ರಾ ಮಹೋತ್ಸವದಲ್ಲಿ ಅಹಿತಕರ ಘಟನೆ ನಡೆಯದಂತೆ ಬಂಧುಬಸ್ತ ವ್ಯವಸ್ಥೆ ನೀಡಿದ್ದರು


ವರದಿ ಶಂಕರ್ ವನಕಿ ಕಮತಗಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!