KHADAK KANNADA NEWS
ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಬೇಡಿಕೆಗಳ ಕುರಿತು ಅನಿರ್ಧಿಷ್ಟಾವಧಿ ಮುಷ್ಕರ !
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಪುರಸಭೆ ಕಚೇರಿಯ ಮುಂದೆ ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸಂಘವು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಟಾವದಿ
ರಾಜ್ಯಾದ್ಯಾಂತ ಕಚೇರಿ ಕೆಲಸ ಹಾಗೂ ಸ್ವಚ್ಚತೆ ಸ್ಥಗೀತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಳ್ಳಲು ಉಲ್ಲೇಖ (2) ರ ಆದೇಶದನ್ವಯ ಮುಷ್ಕರ ಪ್ರಾರಂಭಿಸಲಾಗಿರುತ್ತದೆ.
ಹಾಗೂ ನೀರು ಸರಬರಾಜು ಸಹ ಸ್ಥಗೀತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲು ನಿರ್ದರಿಸಲಾಗಿರುತ್ತದೆ. ಹಾಗೂ ಮುಂದಿನ ರಾಜ್ಯ ಸಂಘದಿಂದ ಸಂದೇಶ ಬರುವರೆಗೂ ಮುಷ್ಕರವನ್ನು ನಡೆಸಲು ತೀರ್ಮಾನಿಸಿರುವುದರಿಂದ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘ (ರಿ) ಶಾಖೆ ರಾಮದುರ್ಗ ವತಿಯಿಂದ ರಾಮದುರ್ಗ ಪುರಸಭೆ ವ್ಯಾಪ್ತಿಯಲ್ಲಿ ಕಚೇರಿ ಕೆಲಸ ಹಾಗೂ ಸ್ವಚ್ಚತೆ ಸ್ಥಗೀತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗಿದೆ.
ನೌಕರರ ಬೇಡಿಕೆಗಳು :
ರಾಜ್ಯ ಸರ್ಕಾರಿ ನೌಕರರಿಗೆ ನೀಡುವ ಪ್ರತಿಯೊಂದು ಸವಲತ್ತುಗಳನ್ನು ಪೌರಸೇವಾ ನೌಕರರಿಗೆ ಪ್ರತ್ಯೇಕ ಆದೇಶವಿಲ್ಲದೆ ವಿಸ್ತರಿಸುವುದು. ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ದಿನಗೂಲಿ/ಕ್ಷೇಮಾಭಿವೃದ್ಧಿ ಅಧಿನಿಯಮದಡಿ ಇರುವ ನೌಕರರನ್ನು ಸಕ್ರಮತಿಗೊಳಿಸುವುದು.ನಗರಸಭೆಗಳಲ್ಲಿ 100% ರಷ್ಟು ಪೌರಕಾರ್ಮಿಕರನ್ನು ವಿಶೇಷ ನೇಮಕಾತಿಯಡಿ ನೇಮಕಾತಿ ಮಾಡಬೇಕು.
2022ನೇ ಸಾಲಿನ ವಿಶೇಷ ನೇಮಕಾತಿ ಅಡಿ ಆಯ್ಕೆಯಾದ ಪೌರಕಾರ್ಮಿಕರು/ಲೋಡರಗಳಿಗೆ ಎಸ್.ಎಫ್.ಸಿ ವೇತನ ನಿಧಿಯಿಂದ ವೇತನ ಪಾವತಿಸಬೇಕು
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೀರು ಸರಬರಾಜು ನೌಕರರನ್ನು ವಿಶೇಷ ನೇಮಕಾತಿ ಅಡಿ ಪರಿಗಣಿಸುವ ಬಗ್ಗೆ.
ಪೌರ ಸೇವಾ ನೌಕರರಿಗೆ ಜ್ಯೋತಿ ಸಂಜೀವಿನ/ನಗದು ರಹಿತ ಚಿಕಿತ್ಸಾ ಸೌಲಭ್ಯವನ್ನು ಕಲ್ಪಿಸಬೇಕು. ಐ.ಟಿ. ಸಿಬ್ಬಂದಿ/ಆಕೌಂಟ ಕನ್ಸೆಲಟೆಂಟ್/ಕಂಪ್ಯೂಟರ್ ಆಪರೇಟರ್ (ಡಾಟಾ ಎಂಟ್ರಿ ಆಪರೇಟರ್)/ವಾಹನ ಚಾಲಕ/ ಸ್ಯಾನಿಟರಿ ಸೂಪರವೈಜರ್ ಹಾಗೂ ಇತರೇ ವೃಂದದ ನೌಕರರನ್ನು ಪೌರ ಸೇವಾ ನೌಕರೆಂದು ಪರಿಗಣಿಸಿ ವಿಲೀನಾತಿಗೊಳಿಸುವುದು ಈ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗಿದೆ.
ಈ ವೇಳೆಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸಂಘದ ಅಧ್ಯಕ್ಷರು ರೇಣುಕಾ ಪಿ ಹಲಗಿ, ಉಪಾಧ್ಯಕ್ಷ ಕುಮಾರ ಶಿಗ್ಲಿ, ಸಂಘಟನಾ ಕಾರ್ಯದರ್ಶಿ ಸಿ ಪಿ ಪಾಟೀಲ್ ಕಾರ್ಯದರ್ಶಿ ಎಚ್ಎಲ್ ಕಾರಡ್ಡಿ, ಬಿ ಎಂ ನಿಶಾನ್ದಾರ್, ಪುರಸಭೆಯ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು