ಸರ್ವರು ಆರೋಗ್ಯವಂತರಾಗಿ ಬಾಳಬೇಕು
ಕಮತಗಿ - ಸರ್ವರೂ ಆರೋಗ್ಯವಂತರಾಗಿ ಬಾಳಬೇಕು ಹಾಗೂ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಿಕೊಳ್ಳಬೇಕು ಅದಕ್ಕಾಗಿ ಉತ್ತಮ ಆಹಾರ ಸೇವಿಸಬೇಕು ಅಂದಾಗ ಮಾತ್ರ ಆರೋಗ್ಯವಂತರಾಗಿರಲು ಸಹಾಯಕವಾಗುತ್ತದೆ ಎಂದು ಡಾ. ಆರ್ ಟಿ ದೇಶಪಾಂಡೆ ಅಭಿಪ್ರಾಯ ಪಟ್ಟರು
ಅವರು ಬಾಗಲಕೋಟ ಜಿಲ್ಲೆಯ ಕಮತಗಿ ಪಟ್ಟಣದ ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ಕಮತಗಿ ಇದರ ಐದನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಕೆರೂಡಿ ಆಸ್ಪತ್ರೆ ಮತ್ತು ಕೆರೂಡಿ ಬ್ಲಡ್ ಸೆಂಟರ್ ಇವರ ಸಹಯೋಗದಲ್ಲಿ ಜರುಗಿದ ಉಚಿತ ಆರೋಗ್ಯ ತಪಾಸಣಾ ಮತ್ತು ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಬಾಗಲಕೋಟೆಯ ಕೆರೂಡಿ ಆಸ್ಪತ್ರೆಯ ಹೃದ್ರೋಗ ತಜ್ಞರಾದ ಡಾ. ಸಾಗರ ಪಾಟೀಲ ಹಾಗೂ ಎಲವು ಕೀಲು ತಜ್ಞರಾದ ಡಾ. ಚಂದ್ರಶೇಖರ್ ಚನ್ನಪ್ಪನವರ ಕಿಡ್ನಿ ಸ್ಪೆಷಲಿಸ್ಟ್ ಡಾ. ಕಿರಣ್ ಬಿಜಾಪುರ ಇವರು ಉಚಿತ ಆರೋಗ್ಯ ತಪಾಸಣೆಯಲ್ಲಿ ಹಾಜರಿದ್ದರು.
ಗ್ರಾಮಾಂತರ ಪ್ರದೇಶದಲ್ಲಿ ಸಂಸ್ಥೆಯ ಸಾರ್ವಜನಿಕರಿಗೆ ಅನುಕೂಲಕರ ಸೇವೆಗಳನ್ನು ಮಾಡಿಕೊಂಡು ಬರುತ್ತಿರುವುದು ಪ್ರಶಾಂಶನೀಯ ಎಲೆಮರೆಕಾಯಿಯಂತಿರುವ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಾ ಬಂದಿರುವುದು ನಮ್ಮ ಹೆಮ್ಮೆಯ ಹೆಜ್ಜೆ ಫೌಂಡೇಶನ್ ಎಂದು ಹೇಳಿದರೇ ತಪ್ಪಾಗಲಾರದು ಎಂದು ಕಾನಿಪ ಉಪಾಧ್ಯಕ್ಷ ಬಸವರಾಜ ನಿಡಗುಂದಿ ಹೇಳಿದರು.
ಕೆರೂಡಿ ಬ್ಲಡ್ ಸೆಂಟರ್ ವತಿಯಿಂದ ಜರುಗಿದ ಬೃಹತ್ ರಕ್ತದಾನ ಶಿಬಿರದಲ್ಲಿ ಸುಮಾರು 40 ಕ್ಕೂ ಹೆಚ್ಚು ಜನ ರಕ್ತದಾನ ಮಾಡುವುದರ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಹಟಗಾರ ಸಮಾಜದ ಅಧ್ಯಕ್ಷ ಶ್ರೀ ಮಹಾದೇವಪ್ಪ ಚೌಡಾಪೂರ ಕಾರ್ಯಕ್ರಮವನ್ನು ಉದ್ಘಾಟಿಸಿದರು ಶ್ರೀ ಶೇಖರಪ್ಪ ತತ್ರಾಣಿ ಕಾರ್ಯನಿರತ ಪತ್ರಕರ್ತ ಸಂಘದ ಉಪಾಧ್ಯಕ್ಷರಾದ ಶ್ರೀ ಹರ್ಷಕುಮಾರ್ ದೇಸಾಯಿ ಮತ್ತು ಶ್ರೀ ಬಸವರಾಜ್ ನಿಡುಗುಂದಿ ಮುಖ್ಯಅತಿಥಿ ಸ್ಥಾನ ವಹಿಸಿಕೊಂಡಿದ್ದರು,
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಸಂಸ್ಥೆಯ ವೀರಭದ್ರಪ್ಪ ಮುರಾಳ, ಜಂಪಣ್ಣ ಶಿರಗುಂಪಿ. ನಾಗಪ್ಪ ಅಚನೂರ, ಕಾಶಿನಾಥ ತಂಬೂರಿ, ರಮೇಶ ಕುಮಚಗಿ, ಸುನಿಲ್ ಕುಮಚಗಿ, ರಾಜಶೇಖರ ಕೋಲಾರ, ಪಾಲ್ಗೊಂಡಿದ್ದರು ಎಂ ರಮೇಶ್ ಕಮತಗಿ ನಿರೂಪಿಸಿ ವಂದಿಸಿದರು
ವರದಿ - ✍️ ಶಂಕರ್ ವನಕಿ ಕಮತಗಿ