ಇ- ಖಾತಾ ಅಭಿಯಾನ

     ಇ-  ಖಾತಾ ಅಭಿಯಾನ



ಕಮತಗಿ : ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಆಸ್ತಿ, ಮಾಲಿಕರು/ ಅನುಭೋಗದಾರರು ಇ-ಖಾತಾ ನೀಡುವ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳು ಬಾಗಲಕೋಟೆ ರವರ ನಿರ್ದೇಶನದಂತೆ ದಿನಾಂಕ: 13.07.2025 ಭಾನುವಾರ ದಂದು ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 5-30 ರ ವರಗೆ ಇ-ಖಾತಾ ಅಭಿಯಾನವನ್ನು ಪಟ್ಟಣದ ಹೃದಯ ಭಾಗವಾದ ವಾರ್ಡ ನಂ-13ರ ಗಾಂಧಿ ಚೌಕದಲ್ಲಿ ಹಮ್ಮಿಕೊಳ್ಳಗಿದೆ ಕಾರಣ ಆಸ್ತಿ ಮಾಲಿಕರು/ ಅನುಭೋಗದಾರರು ತಮ್ಮ ಮಾಲ್ಕಿಯ ನಿವೇಶನ/ ಕಟ್ಟಡಗಳಿಗೆ ಸಂಬಂಧಿಸಿದ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿದ್ದಲ್ಲಿ ಇ-ಖಾತಾ ನೀಡಲಾಗುವುದು ಎಂದು ಮುಖ್ಯಾಧಿಕಾರಿಗಳಾದ ಎಫ್.ಎನ್ ಹುಲ್ಲಿಕೇರಿ ಹೇಳಿದರು 

ಸದರಿ ಅಭಿಯಾನದಲ್ಲಿ ಆಸ್ತಿ ಮಾಲಿಕರು/ ಅನುಭೋಗದಾರರು ಪಾಲ್ಗೊಂಡು ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಲು ಪ್ರಕಟಣೆಯಲ್ಲಿ ಕೋರಿದ್ದಾರೆ.


ವರದಿ ✍️ ಶಂಕರ್ ವನಕಿ ಕಮತಗಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು