ಕಮತಗಿ ಪಟ್ಟಣ ಪಂಚಾಯತ ಅಧ್ಯಕ್ಷ ರಮೇಶ ಎಸ್ ಜಮಖಂಡಿ ಅವರ ವಿರುದ್ಧ ನಡೆದ ಅವಿಶ್ವಾಸ ಗೊತ್ತುವಳಿ ಮಂಡನೆಯ ಸಭೆಯಲ್ಲಿ ಉಪಾಧ್ಯಕ್ಷರನ್ನೊಳಗೊಂಡು 13 ಜನ ಸದಸ್ಯರು ಅವಿಶ್ವಾಸ ಮಂಡನೆಯನ್ನು ಸಲ್ಲಿಸಿದರು.
12 ಜನ ಪಟ್ಟಣ ಪಂಚಾಯತ ಸದಸ್ಯರು ಕೈ ಎತ್ತುವ ಮೂಲಕ ಪಟ್ಟಣ ಪಂಚಾಯತ ಅಧ್ಯಕ್ಷರ ವಿರುದ್ದ ಜುಲೈ 18 ರಂದು ಸಭಾಂಗಣದಲ್ಲಿ ಬೆಳಿಗ್ಗೆ 11.30ಕ್ಕೆ ಜರುಗಿದ ಸಭೆಯಲ್ಲಿ ಕರ್ನಾಟಕ ಪುರಸಭೆ ಅಧಿನಿಯಮ 1964ರ (47 (3) ರ ಪ್ರಕಾರ ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆಯಲ್ಲಿ ಅವಿಶ್ವಾಸ ಮಂಡನೆಯನ್ನು ಸಲ್ಲಿಸಿದರು ಎಂದು ಪಟ್ಟಣ ಪಂಚಾಯತ ಮಖ್ಯಾಧಿಕಾರಿ ಎಫ್. ಎನ್ ಹುಲ್ಲಿಕೇರಿ ತಿಳಿಸಿದರು
ಅವಿಶವಾಸ ಗೊತ್ತುವಳಿ ಮಂಡನಾ ಸಭೆಯಲಿ ಪಟ್ಟಣ ಪಂಚಾಯತ ಸದಸ್ಯರಾದ ಬಸವರಾಜ ಕುಂಬಳಾವತಿ, ಸಂಗಪ್ಪ ಗಾಣಿಗೇರ, ಹುಚ್ಚೇಶ್ ಮದ್ಲಿ, ರತ್ನಾ ತಳಗೇರಿ, ಹುಚ್ಚವ್ವ ಹಗೆದಾಳ, ಲಕ್ಷ್ಮಣ್ ಮಾದರ, ದೇವಿಪ್ರಸಾದ ನಿಂಬಲಗುಂದಿ, ನಂದಾ ದ್ಯಾಮಣ್ಣವರ, ಸುಮಿತ್ರ ಲಮಾಣಿ, ಮಂಜುಳಾ ಮುರಾಳ, ಕಸ್ತೂರಿಬಾಯಿ ಬಾಗೇವಾಡಿ, ಚಂದಪ್ಪ ಕುರಿ, ಇದ್ದರು ಅಮೀನಗಡ ಪೋಲೀಸರು ಸೂಕ್ತ ಬಂದೂಬಸ್ತ ಕೖಗೊಂಡಿದ್ದರು ಪಟ್ಟಣ ಪಂಚಾಯತ ಸಿಬ್ಬಂದಿಗಳು ಹಾಜರಿದ್ದರು.
ಪಟ್ಟಣದ ಸರ್ವಾಂಗೀನ ಅಭಿವೃದ್ದಿಗೋಸ್ಕರ ಕಾಂಗ್ರೆಸ್ ಪಕ್ಷದವರು ಮಂಡಿಸಿದ ಅಧ್ಯಕ್ಷರ ವಿರುದ್ದದ ಅವಿಶ್ವಾಸಕ್ಕೆ ನಾವು ಬೆಂಬಲ ಕೊಟ್ಟಿದ್ದೇವೆ ಮಂದಿನ ಅವರ ಆಡಳಿತಕ್ಕೂ ಬೆಂಬಲ ನೀಡುತ್ತೇವೆ
ಸಂಗಪ್ಪ ಗಾಣಿಗೇರ
ಪ. ಪಂ ಬಿಜೆಪಿ ಸದಸ್ಯ ಕಮತಗಿ
ಅಧ್ಯಕ್ಷರ ಎಕಪಕ್ಷೀಯ ನಿರ್ಧಾರ, ಸದಸ್ಯರನ್ನು ಗಣನೆಗೆ ತೆಗೆದು ಕೊಳ್ಳದೆ ಇರುವುದು ಪಟ್ಟಣದ ಅಭಿವೃದ್ಧಿಗೆ ಹಿನ್ನಡೆ ಹೀಗೆ ಹತ್ತು ಹಲವಾರು ಘಟನೆಗೆ ಬೇಸತ್ತು ಅಧ್ಯಕ್ಷರ ವಿರುದ್ದ ಅವಿಶ್ವಾಸ ಮಂಡನೆ ಮಾಡಿದ್ದೇವೆ
ಬಸವರಾಜ ಕುಂಬಳಾವತಿ
ಪ,ಪಂ ಕಾಂಗ್ರೆಸ್ ಸದಸ್ಯ ಕಮತಗಿ

