ಮಲಪ್ರಭಾ ನದಿಯಲ್ಲಿ ಪ್ರವಾಹ ಪರೀಸ್ಥಿತಿ

 


ಮಲಪ್ರಭಾ ನದಿಯಲ್ಲಿ ಪ್ರವಾಹ ಪರೀಸ್ಥಿತಿ 


ಕಮತಗಿ: ಧಾರವಾಡ, ನರಗುಂದ, ನವಲಗುಂದ, ಗದಗ, ಲಕ್ಷ್ಮೇಶ್ವರ, ಮತ್ತು ಬೆಣ್ಣೆಹಳ್ಳದ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬದಾಮಿ, ಮತ್ತು ಹುನಗುಂದ ತಾಲೂಕಿನ ಮಲಪ್ರಭಾ ನದಿ ಪಾತ್ರದ ಹಳ್ಳಿಗಳಿಗೆ ಜಲದಿಗ್ಬಂದನವಾಗಿದೆ, 


ಬದಾಮಿ ತಾಲೂಕಿನ ಹೆಬ್ಬಳ್ಳಿಯಲ್ಲಿ ಮಲಪ್ರಭಾನದಿಗೆ ಸೇರುವ ಬೆಣ್ಣೆಹಳ್ಳವು ಪ್ರವಾಹ ಪರೀಸ್ಥಿತಿಯನ್ನು ತಂದೊಡ್ಡಿದೆ, 


ಇತ್ತಿಚೆಗೆ ಕಮತಗಿ ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ವಿಪತ್ತು ನಿರ್ವಹನಾ ಸಭೆ ಜರುಗಿತ್ತು.



ಪ್ರವಾಹ ಪರೀಸ್ಥಿತಿಯನ್ನು ನಿಭಾಯಿಸುವ ಚರ್ಚೆ ನಡೆದಿತ್ತು

ಕಳೆದ ನಾಲ್ಕು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಲಪ್ರಭಾ ನದಿ ಹಾದು ಹೋಗುವ ಹುನಗುಂದ ತಾಲೂಕಿನ ಕಮತಗಿ, ರಾಮಥಾಳ, ಐಹೊಳೆ, ಹಿರೇಮಾಗಿ, ಗ್ರಾಮಗಳ ರೖತರ ಹೊಲಗಳಿಗೆ ನೀರು ನುಗ್ಗಿದ್ದು ರೖತರು ತಮ್ಮ ಪಂಪಸೆಟ್ಟಗಳನ್ನು ಸುರಕಷಿತ ಸ್ಥಳಗಳಿಗೆ ತೆಗೆದುಕೊಂಡು ಹೋಗುವಂತೆ ಅಧಿಕಾರಿಗಳು ತಿಳಿಸಿದ್ದಾರೆ. 

ಕಮತಗಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಜನರು ಮತ್ತು ಜಾನುವಾರುಗಳನ್ನು ನದಿ ತೀರಕ್ಕೆ ತೆರಳದಂತೆ ಕಸ ವಿಲೇವಾರಿ ವಾಹಣದ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ. 

 ಜೊತೆಗೆ ನದಿಗೆ ತೆರಳುವ ಎಲ್ಲ ದಾರಿಗಳನ್ನು ಮುಳ್ಳಿನ ಬೇಲಿ ಹಾಕಿ ದಾರಿ ಬಂದ್ ಮಾಡಲಾಗಿದೆ ಇದರಿಂದ ಜಾನುವಾರುಗಳು ನದಿ ದಂಡೆಗೆ ಹೋಗದಂತೆ ಪ. ಪಂ ಅಧಿಕಾರಿಗಳು ಕ್ರಮ ತೆಗೆದು ಕೊಂಡಿದ್ದಾರೆ.

"ನದಿ ಹತ್ತಿರ ಯಾರು ತೆರಳದಂತೆ ಎಚ್ಚರಿಕೆ ವಹಿಸಬೇಕು ಜನರು ನದಿಯ ಪ್ರವಾಹವನ್ನು ಅರಿತುಕೊಳ್ಳಬೇಕು ಅಧಿಕಾರಿಗಳು ಮತ್ತು ಸರಕಾರ ಸೂಚಿಸಿದ ಹಾಗೆ ನಡೆದುಕೊಳ್ಳಬೇಕು"

ರಮೇಶ ಜಮಖಂಡಿ ಅಧ್ಯಕ್ಷರು ಪ. ಪಂ ಕಮತಗಿ 

"ನದಿ ದಂಡೆಗೆ ಜನರು ಮತ್ತು ಜಾನುವಾರುಗಳು ತೆರಳದಂತೆ ಮುಳ್ಳಿನ ಬೇಲಿಗಳನ್ನು ಹಾಕಿದೆ ನದಿ ದಂಡೆಗೆ ತೆರಳದಂತೆ ನಿರ್ಬಂದಿಸಲಾಗಿದೆ ದಯವಿಟ್ಟು ನಿವಾಸಿಗಳು ಯುವಕರು ನದಿ ದಂಡೆಯಲ್ಲಿ ಹುಚ್ಚು ಸಾಹಸ ಮಾಡಬಾರದು ಹಾಗೂ ನದಿ ದಂಡೆಗೆ ತೆರಳಬಾರದು"

ಎಫ್ ಎನ್, ಹುಲ್ಲಿಕೇರಿ ಮುಖ್ಯಾಧಿಕಾರಿಗಳು ಪ. ಪಂ ಕಮತಗಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು