ಕಮತಗಿ : ಬಾಗಲಕೋಟ ಜಿಲ್ಲೆಯ ಕಮತಗಿ ಪಟ್ಟಣದಲ್ಲಿ ರಾಜಕೀಯ ಚಟುವಟಿಕೆಗಳು ಕ್ಷಣಕ್ಷಣಕ್ಕೂ ತಿರುವು ಪಡೆಯುತ್ತಿರುವುದು ಕಂಡುಬರುತ್ತದೆ ಈ ಬಾರಿ ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಅಸಮಾಧಾನ ಮುಚ್ಚಿಡಲಾಗದೆ ಬಹಿರಂಗವಾಗಿದೆ.
ಹಾಲಿ ಅಧ್ಯಕ್ಷ ರಮೇಶ ಜಮಖಂಡಿಯವರ ವಿರುದ್ಧ ತಮ್ಮದೇ ಪಕ್ಷದ ಕೆಲವು ಸದಸ್ಯರು ಶಾಸನಬದ್ಧ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿರುವುದು ಅಘಾತಕಾರಿ ಸನ್ನಿವೇಶ ಎದುರಾಗಿದೆ.
ಕಮತಗಿ ಪಟ್ಟಣ ಪಂಚಾಯತ ಒಟ್ಟು 16 ಸದಸ್ಯರ ಸಂಖ್ಯಾಬಲವನ್ನು, ಹೊಂದಿದೆ ಅದರಲ್ಲಿ 12 ಮಂದಿ ಕಾಂಗ್ರೆಸ್ ಪಕ್ಷದವರು. ಒಬ್ಬರು ಪಕ್ಷೇತರರು 3 ಜನ ಬಿಜೆಪಿ ಸದಸ್ಯರು ಒಳಗೊಂಡಿದ್ದಾರೆ
ಇದೀಗ ಈ ಸದಸ್ಯರಲ್ಲಿಯೇ ಗುಂಪು ಗುಂಪಾಗಿ ವಿಭಜನೆಯ ವಾತಾವರಣ ನಿರ್ಮಾಣವಾಗಿ ಪ್ರತ್ಯೇಕ ನಾಯಕತ್ವದ ಬೆಂಬಲಕ್ಕಾಗಿ ಬಣ ರಾಜಕೀಯ ಕಂಡುಬಂದಿದೆ.
ಶುಕ್ರವಾರ 13 ಸದಸ್ಯರ ಒಂದು ಗುಂಪು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಎಫ್.ಎನ್. ಹುಲ್ಲಿಕೇರಿಯವರಿಗೆ, ಅವಿಶ್ವಾಸ ನಿರ್ಣಯದ ಮನವಿಯನ್ನು ಸಲ್ಲಿಸಿದ್ದಾರೆ ಶೀಘ್ರದಲ್ಲಿ ತುರ್ತು ಸಭೆ ಕರೆಯಬೇಕು ಎಂದು ಆಗ್ರಹಿಸಿದ್ದಾರೆ
ಅವಿಶ್ವಾಸ ನಿರ್ಣಯದ ಕಾರಣಗಳು ಲಿಖಿತ ರೂಪದಲ್ಲಿ ಇದ್ದು
1 ಅಭಿವೃದ್ಧಿ ಕಾರ್ಯ ಕುಂಠಿತವಾಗಿದೆ
2 ಸದಸ್ಯರೊಂದಿಗೆ ಹೊಂದಾಣಿಕೆ ಇಲ್ಲ
3 ಜನಪ್ರತಿನಿಧಿಗಳ ಮಾತಿಗೆ ಮನ್ನಣೆ ಇಲ್ಲ
4 ಅಧ್ಯಕ್ಷರ ಏಕ ಪಕ್ಷಿಯ ನಿರ್ಧಾರ
ಎಂದು ಆಪಾದಿಸಿದ್ದಾರೆ.
ಈ ಬೆಳವಣಿಗೆಯ ಮಧ್ಯೆ, ಅಧ್ಯಕ್ಷ ರಮೇಶ ಜಮಖಂಡಿ ಅವರ ಸ್ಥಾನ ಭದ್ರತೆ ಬಗ್ಗೆ ಅನುಮಾನಗಳ ಹುತ್ತ ಬೆಳೆಯಲು ಆರಂಭವಾಗಿದೆ
"ಅವರು ಮುಂದುವರೆಯಲಾರರು" ಎಂಬ ನುಡಿಗಳೂ ಕೇಳಿಬರುತ್ತಿವೆ. ಪಕ್ಷದ ಒಳಹೋರಾಟ ಹಾಗೂ ಗೊಂದಲದ ಹಿನ್ನಲೆಯಲ್ಲಿ ಬಹುಮತ ಇದ್ದರೂ ಅವರ ರಾಜಕೀಯ ಭವಿಷ್ಯ ಸವಾಲಾಗಿ ಪರಿನಮಿಸಿದೆ
ಸ್ಥಳೀಯ ಶಾಸಕ ಎಚ್.ವೈ. ಮೇಟಿ ಅವರು ಈ ಪ್ರಕರಣದಲ್ಲಿ ಯಾರ ಪರ ನಿಲ್ಲುತ್ತಾರೆ ಎಂಬುದೂ ಪ್ರಮುಖ ತಿರುವಿನ ಸೂತ್ರವಾಗಿದೆ. ಅವರ ನಿಲುವು ಮುಂದಿನ ಅಧ್ಯಕ್ಷೀಯ ಸ್ಥಾನ ನಿರ್ಧಾರಕ್ಕೆ ಪ್ರಭಾವ ಬೀರುವ ನಿರೀಕ್ಷೆಯು ಇದೆ.
ಇನ್ನು ಮುಂದಿನ ಕೆಲವು ದಿನಗಳು ಕಮತಗಿಯ ರಾಜಕೀಯ ಬೆಳವಣಿಗೆಗಳಿಗೆ ಪ್ರಮುಖವಾಗಲಿದ್ದು, ಸದಸ್ಯರ ನಿಲುವು, ಹೊಸ ಮೈತ್ರಿಗಳ ಹುಟ್ಟು, ಮತ್ತು ಅಧ್ಯಕ್ಷರ ತಾರತಮ್ಯ ನೀತಿ ಹೇಗೆ ರೂಪು ಪಡೆಯುತ್ತವೆ ಎಂಬುದು ಕುತೂಹಲದಿಂದ ಕಾದುನೋಡಬೇಕಾಗಿದೆ
✍️ ಶಂಕರ್ ವನಕಿ ಕಮತಗಿ